ಬೆಂಗಳೂರು: ಕಾಂತಾರ 2 ಸಿನಿಮಾ ತಯಾರಿಯಲ್ಲಿ ತೊಡಗಿರುವ ರಿಷಬ್ ಶೆಟ್ಟಿ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.ರಿಷಬ್ ಕಾಂತಾರ 2 ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕಾಗಿ ತಮ್ಮ ತವರಿನಲ್ಲಿ ಬೀಡುಬಿಟ್ಟಿದ್ದರು. ಇದೀಗ ರಿಷಬ್ ಕಾಂತಾರ 2 ಸ್ಕ್ರಿಪ್ಟ್ ಕೆಲಸ ಮುಗಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.ಸದ್ಯಕ್ಕೆ ಬರವಣಿಗೆಯ ಮೊದಲನೆಯ ಹಂತ ಮುಗಿಸಿದ್ದಾರೆ. ಫೈನಲ್ ಇನ್ನಷ್ಟೇ ಮುಗಿಯಬೇಕಿದೆ. ಅದರ ನಡುವೆ ರಿಷಬ್ ಈಗ ಕೊಂಚ ಬ್ರೇಕ್ ಪಡೆದುಕೊಂಡಿದ್ದು, ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.