ಬೆಂಗಳೂರು: ರಿಷಬ್ ಶೆಟ್ಟಿ ಸಿನಿಮಾ ಕೆಲಸಗಳಲ್ಲಿ ಎಷ್ಟು ಅಚ್ಚುಕಟ್ಟಾಗಿ ತೊಡಗಿಕೊಳ್ಳುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಇದೀಗ ರಿಷಬ್ ತಮ್ಮ ಹೊಸ ಸಿನಿಮಾ ತಂಡದೊಂದಿಗೆ ಕಾಡು ಮೇಡು ಅಲೆಯುತ್ತಿದ್ದಾರೆ!ಜನ್ಮದಿನದಂದು ತಮ್ಮ ಮುಂದಿನ ನಿರ್ದೇಶನದ ಸಿನಿಮಾ ರುದ್ರಪ್ರಯಾಗ ಎಂದು ರಿಷಬ್ ಘೋಷಿಸಿಕೊಂಡಿದ್ದರು. ಅದರಂತೆ ಈಗ ಸಿನಿಮಾಗೆ ಬೇಕಾದ ತಯಾರಿಯಲ್ಲಿದ್ದಾರೆ.ಅದರಂತೆ ಪಶ್ಚಿಮ ಘಟ್ಟದ ಕಾಡು ಮೇಡಿನಲ್ಲಿ ಅಲೆಯುತ್ತಾ ತಮ್ಮ ಸಿನಿಮಾಗೆ ಬೇಕಾದ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ರಿಷಬ್ ಜತೆಗೆ ಅವರ ಸಿನಿ ಸ್ನೇಹಿತರ ತಂಡವೂ