Photo Courtesy: Twitterಬೆಂಗಳೂರು: ಕಾಂತಾರ 2 ಸ್ಕ್ರಿಪ್ಟ್ ಕೆಲಸಗಳಿಗಾಗಿ ಕಾಡಿನಲ್ಲಿ ಓಡಾಡಿ ಮಾಹಿತಿ ಕಲೆ ಹಾಕಿದ್ದ ರಿಷಬ್ ಶೆಟ್ಟಿ ಈಗ ಕಾಡಿನ ಜನರ ಕಷ್ಟ ಪರಿಹರಿಸಲು ಮುಂದಾಗಿದ್ದಾರೆ.ರಿಷಬ್ ಕಾಂತಾರ 2 ಸ್ಕ್ರಿಪ್ಟ್ ಬರೆಯಲೆಂದು ಕಾಡಂಚಿನ ಜನರ ಸಮಸ್ಯೆ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ರಿಷಬ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಾಡಿನ ಕೃಷಿಕರು ಆನೆ ದಾಳಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ, ಅರಣ್ಯ ಇಲಾಖೆ ಗಾರ್ಡ್ ಗಳು ಕಾಡ್ಗಿಚ್ಚಿನ ಸಮಸ್ಯೆ ಬಗ್ಗೆ ಹೇಳಿಕೊಂಡರು.