ರಿಷಬ್ ಶೆಟ್ಟಿ ಮತ್ತು ನೀನಾಸಂ ಸತೀಶ್ ಗೂ ನಾಲ್ಕು ಲಕ್ಕಿ ನಂಬರ್! ಹೇಗಂತೀರಾ?

ಬೆಂಗಳೂರು| Krishnaveni K| Last Modified ಬುಧವಾರ, 6 ನವೆಂಬರ್ 2019 (08:46 IST)
ಬೆಂಗಳೂರು: ಸ್ಯಾಂಡಲ್ ವುಡ್‍ನ ಪ್ರತಿಭಾವಂತ ನಿರ್ದೇಶಕ ರಿಷಬ್ ಶೆಟ್ಟಿ. ಸ್ವಂತ ಪ್ರತಿಭೆಯಿಂದಲೇ ಮೇಲೆ ಬಂದು ತನ್ನದೇ ನೆಲೆ ಕಂಡುಕೊಂಡಿರುವ ನಟ ನೀನಾಸಂ ಸತೀಶ್. ಇಬ್ಬರಿಗೂ ಅದೃಷ್ಟ ಸಂಖ್ಯೆ ನಾಲ್ಕು ಎಂದರೆ ನೀವು ನಂಬಲೇಬೇಕು.

 
ಇಬ್ಬರೂ ಒಂದೇ ಸಮಯದಲ್ಲಿ ಹಿಟ್ ಸಿನಿಮಾ ಕೊಟ್ಟವರು. ಹಿಂದೆ ರಿಷಬ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮಾಡಿದ್ದರು. ಅದು ನೂರು ದಿನ ಆಚರಿಸಿ ಸೂಪರ್ ಹಿಟ್ ಸಾಲಿಗೆ ಸೇರಿಕೊಂಡಿತ್ತು. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಆಗಸ್ಟ್ 14, 2018 ರಂದು.
 
ನೀನಾಸಂ ಸತೀಶ್ ಗೆ ಬ್ರೇಕ್ ಕೊಟ್ಟ ಸಿನಿಮಾ ಅಯೋಗ್ಯ. ರಚಿತಾ ರಾಮ್ ಜತೆಗೆ ಸತೀಶ್ ನಟಿಸಿದ್ದ ಈ ಸಿನಿಮಾ ಹಾಡುಗಳಿಂದ ಹಿಡಿದು ಚಿತ್ರವೂ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಟ್ರೈಲರ್ ಕೂಡಾ ಬಿಡುಗಡೆಯಾಗಿದ್ದು ಆಗಸ್ಟ್ 14 ರಂದು.

 
ಇದೀಗ ನಿನ್ನೆ ಅಂದರೆ ನವಂಬರ್ 4 ರಂದು ರಿಷಬ್ ಶೆಟ್ಟಿ ನಿರ್ದೇಶನದ ಕಥಾ ಸಂಗಮ ಟ್ರೈಲರ್ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು, ಸತೀಶ್ ನಾಯಕರಾಗಿರುವ ಬ್ರಹ್ಮಚಾರಿ ಸಿನಿಮಾದ ಟ್ರೈಲರ್ ಕೂಡಾ ನಿನ್ನೆಯೇ ಬಿಡುಗಡೆಯಾಗಿದೆ. ಅಂದರೆ, ಮತ್ತೆ ಇಬ್ಬರ ಸಿನಿಮಾದ ಟ್ರೈಲರ್ ಮತ್ತೆ ನಾಲ್ಕು ತಾರೀಖಿನಂದೇ ನಡೆದಿದೆ. ಹೀಗಾಗಿ ಅದೇ ನಾಲ್ಕು ಸಂಖ್ಯೆ ಇಬ್ಬರಿಗೂ ಅದೃಷ್ಟ ತರುತ್ತಾ? ಇಬ್ಬರ ಸಿನಿಮಾದ ಟ್ರೈಲರ್ ಮತ್ತೆ ಒಂದೇ ದಿನ ಬಿಡುಗಡೆಯಾಗಿದೆ. ಹೀಗಾಗಿ ಮತ್ತೆ ಇಬ್ಬರ ಸಿನಿಮಾವೂ ಶತದಿನ ಆಚರಿಸಲಿ ಎಂಬುದೇ ಅಭಿಮಾನಿಗಳ ಹಾರೈಕೆ.
ಇದರಲ್ಲಿ ಇನ್ನಷ್ಟು ಓದಿ :