ಬೆಂಗಳೂರು: ಬೆಲ್ ಬಾಟಂ ಯಶಸ್ಸಿನ ಖುಷಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ಆದರೆ ಈ ಹೊಸ ಸಿನಿಮಾದ ಟೈಟಲ್ ನೋಡಿ ಜನ ತಲೆಕೆರೆದುಕೊಳ್ಳುತ್ತಿದ್ದಾರೆ.ಅಷ್ಟು ಸ್ಪೆಷಲ್ ಆಗಿದೆ ಶೆಟ್ಟರ ಹೊಸ ಸಿನಿಮಾ ಟೈಟಲ್. ವಾವ್ ಏನಿದು ಗುರೂ? ಸೂಪರ್ ಆಗಿದೆ ಎಂದು ರಿಷಬ್ ಗೆ ಹೊಗಳಿಕೆ ಜತೆಗೆ ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ರಿಷಬ್ ಸಂಸ್ಥೆಯ ಹೊಸ ಸಿನಿಮಾ ಟೈಟಲ್ ಏನು ಗೊತ್ತಾ?ಅಂಟಗೋನಿ ಶೆಟ್ಟಿ ಎಂಬುದು ಚಿತ್ರದ ಟೈಟಲ್.