ನಿರ್ದೇಶಕ ರಿಷಬ್ ಶೆಟ್ಟಿ ಈಗ ಹಾಡುಗಾರ! ಶೆಟ್ಟರ ಹೊಸ ಅವತಾರ

ಬೆಂಗಳೂರು| Krishnaveni K| Last Modified ಶನಿವಾರ, 2 ನವೆಂಬರ್ 2019 (08:55 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಕರಾಗಿ, ನಟರಾಗಿ, ಬರಹಗಾರರಾಗಿ ಸಿನಿ ರಸಿಕರಿಗೆ ಪರಿಚಯವಿದೆ. ಆದರೆ ರಿಷಬ್ ಶೆಟ್ಟಿ ಮತ್ತೊಂದು ಅವತಾರ ಪ್ರದರ್ಶಿಸಿದ್ದಾರೆ.

 
ಈ ಬಾರಿ ಶೆಟ್ಟರು ಒಂದು ಸಿನಿಮಾಗೆ ಹಾಡು ಹಾಡಿದ್ದಾರೆ. ಅಲ್ಲಿಗೆ ರಿಷಬ್ ಶೆಟ್ಟಿ ಈಗ ಗಾಯಕರೂ ಆಗಿದ್ದಾರೆ. 9 ಸುಳ್ಳು ಕತೆಗಳು ಸಿನಿಮಾಗಾಗಿ ಬಡವ ರ್ಯಾಸ್ಕಲ್ ಎಂದು ಆರಂಭವಾಗು ಹಾಡೊಂದನ್ನು ರಿಷಬ್ ಹಾಡಿದ್ದಾರೆ.
 
ಈ ಹಾಡಿನ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಿಷಬ್ ಶೆಟ್ಟಿ ನಿಂಗ್ ಹಾಡಕ್ಕೆ ಬರಲ್ವಾ ಅಂತ ಬೈಬೇಡಿ. ಇದು ನನ್ನ ಮೊದಲ ಪ್ರಯತ್ನ. ತಪ್ಪಾದ್ರೆ ಹೊಟ್ಟೆಗೆ ಹಾಕ್ಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :