ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ನಿನ್ನೆ ಬಿಡುಗಡೆಯಾಗಿ ಭರ್ಜರಿ ಲೈಕ್ಸ್ ಪಡೆದಿದೆ.ಈ ಮೆಲೊಡಿ ಹಾಡಿನ ಕನ್ನಡ ಅವತರಣಿಕೆಯನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಕೇಳಿ ನಿರ್ದೇಶಕ ರಿಷಬ್ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. ಪವರ್ ಸ್ಟಾರ್ ರೊಮ್ಯಾನ್ಸ್ ಬಗ್ಗೆ ಅವರು ‘ಪವರ್ ಅನ್ನು ಪ್ರೇಮದಲ್ಲಿ ಅದ್ದಿ ತೆಗೆದಾಗ ಹುಟ್ಟಿರಬಹುದಾದ ಸುಂದರ ಗೀತೆ, ಕಿವಿ ತಂಪಾಯಿತು’ ಎಂದು ಹೊಗಳಿದ್ದಾರೆ.