ರಿಷಬ್ ಶೆಟ್ಟಿ ಹಳೇ ಬ್ಯುಸಿನೆಸ್ ತಿಳಿದು ಕಾಲೆಳೆದ ನಿರ್ಮಾಪಕ ಕಾರ್ತಿಕ್ ಗೌಡ

ಬೆಂಗಳೂರು| Krishnaveni K| Last Modified ಗುರುವಾರ, 19 ನವೆಂಬರ್ 2020 (10:49 IST)
ಬೆಂಗಳೂರು: ಸಿನಿಮಾ ರಂಗಕ್ಕೆ ಬರುವ ಮೊದಲು ನಟ, ನಿರ್ದೇಶಕ ರಿಷಬ್ ಶೆಟ್ಟಿ ಏನು ಬ್ಯುಸಿನೆಸ್ ಮಾಡುತ್ತಿದ್ದರು ಗೊತ್ತಾ? ಇದನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 
ಸಿನಿಮಾ ರಂಗಕ್ಕೆ ಬರುವ ಆರೇಳು ವರ್ಷಗಳ ಹಿಂದೆ ನಾನು ಇದೇ ಬ್ಯುಸಿನೆಸ್ ಮಾಡುತ್ತಿದ್ದೆ ಎಂದು ರಿಷಬ್ ನೀರಿನ ಕ್ಯಾನ್ ಸಪ್ಲೈ ಮಾಡುವ ಫೋಟೋ ಹಂಚಿಕೊಂಡಿದ್ದಾರೆ. ರಿಷಬ್ ಈ ವಿಚಾರವನ್ನು ಬಹಿರಂಗಪಡಿಸುತ್ತಿದ್ದಂತೇ ನಿರ್ಮಾಪಕ ಕಾರ್ತಿಕ್ ಗೌಡ ಅವರನ್ನು ತಮಾಷೆ ಮಾಡಿದ್ದು, ನಮಗೂ 50 ಕ್ಯಾನ್ ಹಾಕಿ ಎಂದಿದ್ದಾರೆ. ಇದಕ್ಕೆ ರಿಷಬ್ ಖಂಡಿತಾ ಅಡ್ರೆಸ್ ಕೊಡಿ ಎಂದು ಕೇಳಿದ್ದಾರೆ. ಕಾರ್ತಿಕ್ ಕೂಡಾ ತಮ್ಮ ಅಡ್ರೆಸ್ ನ್ನು ಫನ್ನಿಯಾಗಿ ಬರೆದುಕೊಂಡಿದ್ದಾರೆ. ಇನ್ನು, ಇವರಿಬ್ಬರ ತಮಾಷೆಯ ಮಾತುಕತೆಗೆ ಬೇರೆ ಸ್ನೇಹಿತರೂ ಸೇರಿಕೊಂಡಿದ್ದು, ನೀವ್ಯಾಕೆ ಇದೇ ಬ್ಯುಸಿನೆಸ್ ನ ಕತೆ ಇಟ್ಟುಕೊಂಡು ಒಂದು ಸಿನಿಮಾ ಮಾಡಬಾರದು ಎಂದು ಐಡಿಯಾವನ್ನೂ ಕೊಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :