ಅವನೇ ಶ್ರೀಮನ್ನಾರಾಯಣದಲ್ಲಿ ರಿಷಬ್ ಶೆಟ್ಟಿ ಸರ್ಪ್ರೈಸ್ ಅತಿಥಿ!

ಬೆಂಗಳೂರು, ಶುಕ್ರವಾರ, 29 ನವೆಂಬರ್ 2019 (09:31 IST)

ಬೆಂಗಳೂರು: ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ. ರಕ್ಷಿತ್ ಇದ್ದ ಕಡೆ ರಿಷಬ್ ಇರಲೇಬೇಕಲ್ಲ? ಈಗ ಅವನೇ ಶ್ರೀಮನ್ನಾರಾಯಣದಲ್ಲೂ ರಿಷಬ್ ಅತಿಥಿ ಪಾತ್ರ ಮಾಡಿದ್ದಾರೆ. ಇದು ನಿಜಕ್ಕೂ ಸರ್ಪ್ರೈಸ್.


 
ಇದುವರೆಗೆ ರಿಷಬ್ ಪಾತ್ರ ಮಾಡುವ ಬಗ್ಗೆ ಚಿತ್ರತಂಡ ಎಲ್ಲೂ ಮಾಹಿತಿ ಕೊಟ್ಟಿರಲಿಲ್ಲ. ಆದರೆ ಟ್ರೈಲರ್ ಲಾಂಚ್ ವೇಳೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.
 
ರಕ್ಷಿತ್ ಶೆಟ್ಟಿ ಇರುವಲ್ಲಿ ನಾನಿರಲೇಬೇಕಲ್ಲಾ? ಎಂದು ಮಾತು ಶುರು ಮಾಡಿದ ರಿಷಬ್, ಅವನ ಒತ್ತಾಯದಿಂದಲೇ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದೆ. ನಾನು ಕೌ ಬಾಯ್ ಕೃಷ್ಣ ಎಂಬ ಪಾತ್ರ ಮಾಡಿದ್ದೇನೆ. ನನ್ನ ಪಾತ್ರ ಮಾತ್ರ ಇಲ್ಲಿ ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿದಿದ್ದು. ಇದುವರೆಗೆ ನಾನು ಎಲ್ಲೂ ಹೇಳಿಕೊಂಡಿರಲಿಲ್ಲ ಎಂದು ನಗುತ್ತಲೇ ರಿಷಬ್ ತಾವೂ ಪಾತ್ರ ಮಾಡಿರುವುದನ್ನು ಒಪ್ಪಿಕೊಂಡರು. ಅಲ್ಲದೆ ತಮ್ಮ ಗೆಳೆಯ ರಕ್ಷಿತ್ ಕನಸಿಗೆ ಶುಭ ಹಾರೈಸಿದರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅವನೇ ಶ್ರೀಮನ್ನಾರಾಯಣ ಸೆಟ್ ನಲ್ಲಾದ ಅನುಭವ ಹಂಚಿಕೊಂಡ ಸಾನ್ವಿ ಶ್ರೀವಾಸ್ತವ್

ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಸೆಟ್ ನಲ್ಲಿ ಆದ ಅನುಭವ ನನಗೆ ಬೇರೆ ಎಲ್ಲೂ ಸಿಕ್ಕಿರಲಿಲ್ಲ ಎಂದು ...

news

ಹೊಸ ಸಿನಿಮಾದೊಂದಿಗೆ ಬಂದ ಮಾಸ್ಟರ್ ಆನಂದ್

ಬೆಂಗಳೂರು: ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಮಾಸ್ಟರ್ ಆನಂದ್ ಸದ್ದಿಲ್ಲದೇ ಒಂದು ಸಿನಿಮಾ ಮುಗಿಸಿ ಅದು ...

news

ಸಲ್ಮಾನ್ ಖಾನ್ ದಾರಿ ಹಿಡಿದ ಕಿಚ್ಚ ಸುದೀಪ್! ಸೈಕಲ್ ಸವಾರಿಗೆ ಜನ ಫಿದಾ

ಬೆಂಗಳೂರು: ಕಿಚ್ಚ ಸುದೀಪ್ ಆಗಾಗ ಅಭಿಮಾನಿಗಳಿಗೆ ಚಮಕ್ ಕೊಡುತ್ತಿರುತ್ತಾರೆ. ಇದೀಗ ಸೈಕಲ್ ಸವಾರಿ ಮಾಡಿದ ...

news

‘ಬ್ರಹ್ಮಚಾರಿ’, ‘ಮುಂದಿನ ನಿಲ್ದಾಣ’ ಇಂದು ತೆರೆಗೆ

ಬೆಂಗಳೂರು: ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಮತ್ತು ಪ್ರವೀಣ್, ರಾಧಿಕಾ ನಾರಾಯಣ ಮುಂತಾದವರು ...