Photo Courtesy: Twitterಮಂಗಳೂರು: ಬಹುನಿರೀಕ್ಷಿತ ಕಾಂತಾರ 2 ಸಿನಿಮಾ ಡ್ರಾಫ್ಟ್ ಸ್ಕ್ರಿಪ್ಟ್ ಸಿದ್ಧಪಡಿಸಿರುವ ರಿಷಬ್ ಶೆಟ್ಟಿ ಈಗ ಸಣ್ಣ ಬಿಡುವು ಪಡೆದಿದ್ದಾರೆ.ತಮ್ಮ ತವರಿನಲ್ಲಿರುವ ರಿಷಬ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಪ್ರಗತಿ, ಮಕ್ಕಳೊಂದಿಗೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.ರಿಷಬ್ ದೇವಾಲಯಕ್ಕೆ ಆಗಮಿಸಿದ್ದರಿಂದ ಅಭಿಮಾನಿಗಳು ಅವರೊಡನೆ ಸೆಲ್ಫೀಗಾಗಿ ಮುಗಿಬಿದ್ದರು. ಡ್ರಾಫ್ಟ್ ಸ್ಕ್ರಿಪ್ಟ್ ಸಿದ್ಧಗೊಂಡ ಬೆನ್ನಲ್ಲೇ ರಿಷಬ್ ದೇವರ ಮೊರೆ ಹೋಗಿರುವುದು ವಿಶೇಷ.