ಬೆಂಗಳೂರು: ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಆರಂಭವಾಗಿರುವ ಅಭಿಯಾನಕ್ಕೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ಧ್ವನಿಗೂಡಿಸಿದ್ದಾರೆ.ಹಿಂದಿ ಹೇರಿಕೆ ವಿರುದ್ಧ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಧ್ವನಿಯೆತ್ತಿದ್ದರು. ಇದೀಗ ರಿಷಬ್ ಕೂಡಾ ಅವರ ಸಾಲಿಗೆ ಸೇರಿದ್ದಾರೆ. ಸುಲಿದಿತ್ತ ರಸಬಾಳೆಯಷ್ಟು ಸುಲಲಿತವಾದ ಭಾಷೆ ನಮ್ಮದಿರುವಾಗ ಇನ್ನೊಂದು ಭಾಷೆಯ ಅಗತ್ಯವಾದರೂ ಏನು? ನಾವು ಕನಸು ಕಾಣೋ ಭಾಷೆ, ನಮ್ಮ ನಾಲಿಗೆಯಲಾಡಲು ಬಿಡಿ. ಓಲೈಸುವ ನೆಪದಿ ನಮ್ಮ ಕಂದಮ್ಮಗಳಾಡೋ ಅಮ್ಮ ಪದದಿಂದ ಅ ತೆಗೆದು ಮಾ ಉಳಿಸುವ