ಬೆಂಗಳೂರು: ರಕ್ಷಿತ್ ಶೆಟ್ಟಿ ಜನ್ಮ ದಿನಕ್ಕೆ ಶ್ರೀಮನ್ನಾರಾಯಣ ಟೀಸರ್ ಬಿಡುಗಡೆಯಾಗಿದ್ದು, ಜತೆಗೆ ಮತ್ತೆ ಸೋಷಿಯಲ್ ಮೀಡಿಯಾ ಖಾತೆ ತೆರೆದು ರಕ್ಷಿತ್ ಅಭಿಮಾನಿಗಳಿಗೆ ಡಬಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಇನ್ನು ಬರ್ತ್ ಡೇ ದಿನ ಎರಡೆರಡು ಸುದ್ದಿ ಕೊಟ್ಟ ರಕ್ಷಿತ್ ಗೆ ಗೆಳೆಯ, ನಿರ್ದೇಶಕ ರಿಷಬ್ ಶೆಟ್ಟಿ ಶುಭಾಷಯ ಕೋರಿದ್ದಾರೆ. ಅಲ್ಲದೆ, ತಮ್ಮದೇ ಶೈಲಿಯಲ್ಲಿ ಅಭಿನಂದಿಸಿದ್ದಾರೆ.ಮಗಾ ಜಾಸ್ತಿ ಏನೂ ಹೇಳಲ್ಲ. ಮೂರು ವರ್ಷ ಗ್ಯಾಪ್ ಕೊಟ್ಟು ಅವನೇ ಶ್ರೀಮನ್ನಾರಾಯಣ ಮೂಲಕ ಮತ್ತೆ ಬರ್ತಿದ್ದೀಯಾ.