ಆ.18ರಿಂದ ಆರಂಭವಾಗಲಿದೆ ರೋರಿಂಗ್ ಸ್ಟಾರ್ ಭರಾಟೆ!

ಬೆಂಗಳೂರು, ಶುಕ್ರವಾರ, 11 ಅಕ್ಟೋಬರ್ 2019 (15:23 IST)

ರೋರಿಂಗ್ ಸ್ಟಾರ್ ಶ್ರೀಮುರುಳಿ ನಟಿಸಿರೋ ಭರಾಟೆ ಚಿತ್ರ ಇದೇ 18ನೇ ತಾರೀಕಿನಂದು ತೆರೆ ಕಾಣಲಿದೆ. ಮುಹೂರ್ತ ಕಂಡಂದಿಂನಿಂದ ಈ ಕ್ಷಣದ ವರೆಗೂ ಯಾವ ಹಂತದಲ್ಲಿಯೂ ಭರಾಟೆ ಕ್ರೇಜ್ ಕಡಿಮೆಯಾಗಿದ್ದೇ ಇಲ್ಲ.
bharate

ಸದಾ ನಿಗಿ ನಿಗಿಸೋ ಕೆಂಡದಂಥಾ ಕುತೂಹಲವನ್ನು ಕಾಯ್ದಿಟ್ಟುಕೊಂಡು ಬಂದಿರೋ ಈ ಚಿತ್ರ ಅದೇ ಬಿರಿಸಿನೊಂದಿಗೆ ಈಗ ತೆರೆಗಾಣುವ ಹಂತದಲ್ಲಿದೆ.
bharate

ಈ ಹೊತ್ತಿಗೆಲ್ಲ ಜಾಹೀರಾಗಿರೋ ಡೈಲಾಗ್ ಟ್ರೇಲರ್, ಹಾಡುಗಳ ಮೂಲಕವೇ ಇದು ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳೂ ಧ್ವನಿಸುತ್ತಿವೆ.
bharate
ಚೇತನ್ ಕುಮಾರ್ ನಿರ್ದೇಶನದ ಈವರೆಗಿನ ಚಿತ್ರಗಳೆಲ್ಲವೂ ಒಂದೊಂದು ರೀತಿಯಲ್ಲಿ ಹಿಟ್ ಆಗಿದ್ದವು. ಭರ್ಜರಿ ಕಥೆ, ಚುರುಕಿನ ನಿರೂಪಣೆ ಮತ್ತು ಪಕ್ಕಾ ಮಾಸ್ ಶೈಲಿ ಚೇತನ್ ಅವರ ಟ್ರೇಡ್ ಮಾರ್ಕುಗಳು. ಆದರೆ ಈ ಸಿನಿಮಾವನ್ನವರು ಫ್ಯಾಮಿಲಿ ಪ್ಯಾಕೇಜಿನಂತೆ ರೂಪಿಸಿರೋದು ವಿಶೇಷ.ಇಲ್ಲಿ ಶ್ರೀಮುರುಳಿ ಮಾಸ್ ಅವತಾರದ ಜೊತೆ ಜೊತೆಗೇ ಈ ವರೆಗೆ ಎಂದೂ ಕಾಣಿಸದಿದ್ದ ಸೇಡಿನ ಪಾತ್ರದಲ್ಲಿಯೂ ನಟಿಸಿದ್ದಾರಂತೆ. ಆದರೆ ಅದರ ಸ್ವರೂಪವೇನನ್ನೋದನ್ನು ಚಿತ್ರತಂಡ ಎಲ್ಲಿಯೂ ಕಾಣಿಸಿಲ್ಲ. ಅದರ ಬಗ್ಗೆ ಸಣ್ಣ ಅಂಶವನ್ನೂ ಕೂಡಾ ಜಾಹೀರು ಮಾಡಿಲ್ಲ. ಈ ಮೂಲಕ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವ ತಂತ್ರಗಾರಿಕೆಯಲ್ಲವರು ಗೆದ್ದಿದ್ದಾರೆ.
bharate
ಶ್ರೀಮುರುಳಿ ಚಿತ್ರಗಳೆಂದ ಮೇಲೆ ಮಾಸ್ ಅಂಶಗಳು ಖಾಯಂ. ಆದರೆ ಇಲ್ಲಿರೋದು ಬೇರೆಯದ್ದೇ ಥರದ ಮಾಸ್ ಸನ್ನಿವೇಶಗಳು. ಇಲ್ಲಿ ಸಾಹಸದ ಖದರ್ ಎಂಥಾದ್ದಿದೆ ಅನ್ನೋದಕ್ಕೆ ಶ್ರೀಮುರುಳಿಗೆ ಎದುರಾಗಿ ಸೆಡ್ಡು ಹೊಡೆದಿರುವ ಖಳ ನಟರ ದಂಡಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ.
bharate

ಇಲ್ಲಿ ಒಬ್ಬಿಬ್ಬರಲ್ಲ, ಬರೋಬ್ಬರಿ ಹದಿನೇಳು ಮಂದಿ ಖಳ ನಟರು ಅಖಾಡಕ್ಕಿಳಿದಿದ್ದಾರೆ. ಒಂದು ಸಿನಿಮಾದಲ್ಲಿ ಒಂದಿಬ್ಬರು ಮುಖ್ಯ ಖಳ ನಟರಿರೋದು ವಾಡಿಕೆ.
bharate

ಆದರೆ ಈ ಚಿತ್ರದಲ್ಲಿ ಹದಿನೇಳು ಮಂದಿ ಇರೋದೇ ನಿಜವಾದ ಆಕರ್ಷಣೆ. ಅದೆಲ್ಲವೂ ಇದೇ ಹದಿನೆಂಟನೇ ತಾರೀಕಿನಂದು ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿವೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ ಶೋನಲ್ಲಿ ಯಾರು ಇರ್ತಾರೆ ಎಂದು ನನಗೂ ಗೊತ್ತಿಲ್ಲ ಎಂದ ಕಿಚ್ಚ ಸುದೀಪ್

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 7 ಆರಂಭವಾಗಲು ಎರಡನೇ ದಿನ ಬಾಕಿಯಿರುವಾಗ ಕಲರ್ಸ್ ವಾಹಿನಿ ಕಿಚ್ಚ ...

news

ರಶ್ಮಿಕಾ ಮಂದಣ್ಣ ಥರಾ ಲಿಪ್ ಲಾಕ್ ಮಾಡಲ್ಲ ಎಂದ ಹರಿಪ್ರಿಯಾ

ಬೆಂಗಳೂರು: ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ನಟಿ ಹರಿಪ್ರಿಯಾ ಸೃಜನ್ ಲೋಕೇಶ್ ಜತೆಗೆ ಕಾಣಿಸಿಕೊಂಡಿರುವ ...

news

ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ ಇಂದಿನಿಂದ: ವಿಶ್ ಮಾಡಿದ ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತ್ಯಂತ ಆಪ್ತ ಮಿತ್ರನೆಂದರೆ ಸೃಜನ್ ಲೋಕೇಶ್. ಸೃಜನ್ ನಿರ್ಮಿಸಿ ...

news

ಶ್ರೀಮುರಳಿ ಭರಾಟೆ ರಿಲೀಸ್ ಡೇಟ್ ಅನೌನ್ಸ್ ಆಯ್ತು

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾ ರಿಲೀಸ್ ಯಾವಾಗ ಎಂದು ಕಾಯುತ್ತಿದ್ದ ...