ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಗೆದ್ದಿದೆ. ಜೊತೆಗೆ ಸೋತಿದ್ದ ಚಿತ್ರರಂಗಕ್ಕೂ ಹೊಸ ಉತ್ಸಾಹ ನೀಡಿದೆ. ಲಾಕ್ ಡೌನ್ ಬಳಿಕ ಚಿತ್ರರಂಗ ತೆರೆದರೂ ಜನ ಥಿಯೇಟರ್ ಗೆ ಬರಲು ಹಿಂದೇಟು ಹಾಕುತ್ತಿದ್ದರು. ಈಗ ಸರ್ಕಾರವನ್ನು ಒಪ್ಪಿಸಿ ಫುಲ್ ಹೌಸ್ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡರೂ ನಿರ್ಮಾಪಕರಿಗೆ ಒಳಗೊಳಗೇ ಅಳುಕಿತ್ತು.ಆದರೆ ಆ ಅಳುಕನ್ನೆಲ್ಲಾ ನಿವಾರಿಸಿ ರಾಬರ್ಟ್ ಗೆದ್ದಿದೆ. ಅದೂ ಭರ್ಜರಿ ಗಳಿಕೆ ಮಾಡಿ ಮುಂದಿನ ದಿನಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು