ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಒಂದೇ ದಿನ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮಾಡಿದೆ.ಕನ್ನಡ ಮತ್ತು ತೆಲುಗಿನಲ್ಲಿ ಒಂದೇ ದಿನ ಈ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು ಥಿಯೇಟರ್ ನಲ್ಲಿ ಹುಚ್ಚೆದ್ದು ಕುಣಿದಿದ್ದಾರೆ. ಈ ಸಿನಿಮಾ ಒಂದೇ ದಿನ 20 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಬಂದಿದೆ.ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ರಾಬರ್ಟ್ ದೂಳೆಬ್ಬಿಸಿದೆ. ಕರ್ನಾಟಕ ಮಾತ್ರದಲ್ಲೇ 17 ಕೋಟಿ ಗಳಿಕೆ ಮಾಡಿದೆ