Widgets Magazine

ದರ್ಶನ್ ರಾಬರ್ಟ್ ಸಿನಿಮಾದ ಒಂದೇ ಹಾಡಿಗೆ 20 ಜನ ಗಾಯಕರು!

ಬೆಂಗಳೂರು| Krishnaveni K| Last Modified ಮಂಗಳವಾರ, 19 ನವೆಂಬರ್ 2019 (09:10 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಬಳಿಕ ರಾಬರ್ಟ್ ಸಿನಿಮಾ ಸೆಟ್ಟೇರುತ್ತಿದೆ. ಈ ಸಿನಿಮಾದ ಬಗ್ಗೆ ಎಕ್ಸೈಟಿಂಗ್ ಸುದ್ದಿಯೊಂದು ಹೊರಬಂದಿದೆ.

 
ದರ್ಶನ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿತ್ತು. ಈ ಅದ್ಧೂರಿ ವೆಚ್ಚದ ಸಿನಿಮಾ ಬಗ್ಗೆ  ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಈ ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರೆ.
 
ಈ ಸಿನಿಮಾದ ಒಂದೇ ಹಾಡಿಗೆ 20 ಜನ ಪುರುಷ ಹಾಡುಗಾರರು ಧ್ವನಿ ನೀಡಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ ಈಗಾಗಲೇ ಮುಗಿದಿದೆ. ಹಲವು ಹಿರಿಯ ಕಿರಿಯ ಗಾಯಕರು ಸೇರಿದಂತೆ 20 ಜನ ಹಾಡುಗಾರರು ಈ ಹಾಡನ್ನು ಹಾಡಿದ್ದಾರೆ. ಅಂದ ಹಾಗೆ ಡಿಸೆಂಬರ್ 2 ರಿಂದ ರಾಬರ್ಟ್ ಸಿನಿಮಾ ಲಾಂಚ್ ಆಗಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ಎಂಬ ಸುದ್ದಿ ಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :