ಬೆಂಗಳೂರು: ಕಾರ್ಮಿಕರ ದಿನವಾದ ಇಂದು ಚಿತ್ರೀಕರಣದ ಯಶಸ್ಸಿಗೆ ತೆರೆ ಹಿಂದೆ ಕೆಲಸ ಮಾಡುವ ಕೈಗಳಿಗೆ ಗೌರವ ಅರ್ಪಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮೇಕಿಂಗ್ ವಿಡಿಯೋ ಬಿಡುಗಡೆಗೊಳಿಸಲಾಗಿದೆ.ಭರ್ಜರಿ ಆಕ್ಷನ್ ಸೀಕ್ವೆನ್ಸ್ ಗಳಿರುವ ರಾಬರ್ಟ್ ಸಿನಿಮಾದ ಮೇಕಿಂಗ್ ಗಾಗಿ ತೆರೆ ಹಿಂದೆ ಕೆಲಸ ಮಾಡಿದ ಕಾರ್ಮಿಕರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ವಿಡಿಯೋ ತಯಾರಿಸಲಾಗಿದೆ. ಈ ವಿಡಿಯೋ ಕಾರ್ಮಿಕರಿಗೆ ಅರ್ಪಣೆ ಎಂದು ದರ್ಶನ್ ಹೇಳಿದ್ದಾರೆ.ಸುಮಾರು 1 ನಿಮಿಷ 37 ಸೆಕೆಂಡುಗಳ ವಿಡಿಯೋ