ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ನಾಳೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ವಿಜಯಯಾತ್ರೆ ನಾಳೆಯಿಂದ ಆರಂಭವಾಗಬೇಕಾಗಿತ್ತು. ಆದರೆ ಅದೀಗ ರದ್ದಾಗಿದೆ. ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡ ರಾಬರ್ಟ್ ವಿಜಯಯಾತ್ರೆಯನ್ನು ರದ್ದುಗೊಳಿಸಿದೆ. ಮಾರ್ಚ್ 29 ರಿಂದ ಏಪ್ರಿಲ್ 1 ರವರೆಗೆ ರಾಜ್ಯದ ವಿವಿಧ ಭಾಗಗಳಿಗೆ ನಾಯಕ ದರ್ಶನ್ ಹಾಗೂ ಚಿತ್ರತಂಡ ಪ್ರವಾಸ ಕೈಗೊಂಡು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ತೀರ್ಮಾನಿಸಿತ್ತು.ಆದರೆ ಕೊರೋನಾ ಹಿನ್ನಲೆಯಲ್ಲಿ ವಿಜಯಯಾತ್ರೆ