ರಾಬರ್ಟ್ ಸಿನಿಮಾ ಬಗ್ಗೆ ಬಂದ ವದಂತಿಗೆ ಸ್ಪಷ್ಟನೆ ಕೊಟ್ಟ ಚಿತ್ರತಂಡ

ಬೆಂಗಳೂರು| Krishnaveni K| Last Modified ಬುಧವಾರ, 7 ಏಪ್ರಿಲ್ 2021 (08:41 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಯೊಂದಕ್ಕೆ ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ.

 
ರಾಬರ್ಟ್ ಸಿನಿಮಾ 25 ದಿನ ಪೂರೈಸಿದ ಬೆನ್ನಲ್ಲೇ  ಈ ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಸಂತೋಷ್ ಥಿಯೇಟರ್ ನಿಂದ ಎತ್ತಂಗಡಿಯಾಗಲಿದೆ ಎಂಬ ಸುದ್ದಿ ಕೇಳಿಬಂದಿತ್ತು.
 
ಇದಕ್ಕೀಗ ಸ್ಪಷ್ಟನೆ ಕೊಟ್ಟಿರುವ ಚಿತ್ರತಂಡ ರಾಬರ್ಟ್ ಸಿನಿಮಾ ಕೆಲವು ದಿನಗಳ ಕಾಲ ಸಂತೋಷ್ ಥಿಯೇಟರ್ ನಲ್ಲಿಯೇ ಪ್ರದರ್ಶನ ಕಾಣಲಿದೆ ಎಂದಿದೆ. ಇನ್ನು, ದರ್ಶನ್ ಅಭಿಮಾನಿಗಳ ಬಳಗದವರೂ ಸದ್ಯದಲ್ಲೇ ಈ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯೆಲ್ಲಾ ಸುಳ್ಳು ಎಂದಿದೆ. ಈಗಲೂ ವೀಕೆಂಡ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾ ಈಗಲೇ ಕಿರುತೆರೆಗೆ ಬರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :