ಬೆಂಗಳೂರು: ಎಲ್ಲವೂ ಅಂದುಕೊಂಡಂತೇ ನಡೆದಿದ್ದರೆ ಲಾಕ್ ಡೌನ್ ಗೂ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಥಿಯೇಟರ್, ಚಿತ್ರೀಕರಣ ಬಂದ್ ಆಗಿದ್ದರಿಂದ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಇದೀಗ ಚಿತ್ರಗಳು ಬಿಡುಗಡೆಯಾಗಿ ಸಿದ್ಧವಾಗಿದೆ. ಆದರೆ ಜನರು ಥಿಯೇಟರ್ ಗೆ ಬರಲು ಇನ್ನೂ ಆರಂಭಿಸಿಲ್ಲ. ಹೀಗಾಗಿ ಸಹಜ ಸ್ಥಿತಿಗೆ ಬರಲು ಈ ಎರಡೂ ಚಿತ್ರತಂಡಗಳು ಕಾಯುತ್ತಿವೆ. ಇದರ