Widgets Magazine

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ರಾಕಿಂಗ್ ಸ್ಟಾರ್ ಯಶ್ ಯಶೋಮಾರ್ಗದ ನೆರವು

ಬೆಂಗಳೂರು| Krishnaveni K| Last Modified ಶನಿವಾರ, 10 ಆಗಸ್ಟ್ 2019 (09:39 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಸಂಸ್ಥೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದೆ.
 

ಬೇಸಿಗೆಯಲ್ಲಿ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದ ಯಶೋಮಾರ್ಗ ಸಂಸ್ಥೆ ಇದೀಗ ನೆರೆ ಪರಿಹಾರಕ್ಕೆ ಧಾವಿಸಿದೆ.
 
ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಸಂತ್ರಸ್ತರಿಗೆ ನೇರವಾಗಿ ಅಗತ್ಯ ವಸ್ತುಗಳನ್ನು ಒಪ್ಪಿಸುವ ಕೆಲಸದಲ್ಲಿ ರಾಕಿಂಗ್ ಸ್ಟಾರ್ ಅವರ ಯಶೋಮಾರ್ಗ ಸದಸ್ಯರು ನಿರತರಾಗಿದ್ದಾರೆ.  ಬೆಳಗಾವಿಯ ವಿವಿಧ ಗಂಜಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರ ದಿನ ಬಳಕೆಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ಈ ತಂಡ ಮಾಡಿದೆ.
ಇದರಲ್ಲಿ ಇನ್ನಷ್ಟು ಓದಿ :