ಬೆಂಗಳೂರು: ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ವರ್ಷವೇ ಕಳೆದಿದೆ. ಹಾಗಿದ್ದರೂ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಇನ್ನೂ ಅಪ್ ಡೇಟ್ ಕೊಟ್ಟಿಲ್ಲ.ಮಾಧ್ಯಮಗಳು ಎದುರಾದಾಗಲೆಲ್ಲಾ ಸದ್ಯದಲ್ಲೇ ಕೊಡ್ತೀನಿ. ಅದರದ್ದೇ ತಯಾರಿಯಲ್ಲಿದ್ದೇನೆ ಎನ್ನುತ್ತಿದ್ದಾರೆ. ಆದರೆ ಇದುವರೆಗೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್ ಡೇಟ್ ಕೊಟ್ಟೇ ಇಲ್ಲ. ಅಭಿಮಾನಿಗಳಿಗೂ ಕಾದು ಕಾದು ನಿರಾಸೆಯಾಗಿದೆ.ಹೀಗಾಗಿ ನಿನ್ನೆ ದಿನವಿಡೀ ಟ್ವಿಟರ್ ನಲ್ಲಿ ಯಶ್ ಫ್ಯಾನ್ಸ್ ನಮ್ಮ ಭಾವನೆಗಳನ್ನು ನೋಯಿಸಬೇಡಿ ಎಂದು ಹ್ಯಾಶ್ ಟ್ಯಾಗ್