ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ಆಂಧ್ರದಲ್ಲೂ ರಾಕಿಂಗ್ ಸ್ಟಾರ್ ಯಶ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅವರ ಅಭಿಮಾನ ಎಷ್ಟೆಂದು ಈಗ ಸ್ವತಃ ಯಶ್ ಗೂ ಅರಿವಾಗಿದೆ.ಆಂಧ್ರದ ಕಡಪ ಬಳಿ ಶೂಟಿಂಗ್ ಗೆ ತೆರಳಿದ್ದ ಯಶ್ ರನ್ನು ನೋಡಲು ಅಭಿಮಾನಿಗಳ ಸಮೂಹವೇ ಸೇರಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ನೋಡಲು ಯಶ್ ತಮ್ಮ ವಾಹನದಿಂದ ಇಳಿದುಬರಬೇಕಾಯಿತು.ತಮ್ಮ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳ ಕಿರುಚಾಟ ಮೇರೆ ಮೀರಿತ್ತು. ಕೊನೆಗೆ ಎಲ್ಲರೆಡೆ ಕೈ