ಬೆಂಗಳೂರು: ಕೊರೋನಾದಿಂದಾಗಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಸಿನಿಮಂದಿಗೆ ರಾಕಿಂಗ್ ಸ್ಟಾರ್ ಯಶ್ ವೈಯಕ್ತಿಕವಾಗಿ ಧನ ಸಹಾಯ ಮಾಡಲು ಮುಂದೆ ಬಂದಿದ್ದಾರೆ.ಶೂಟಿಂಗ್ ಇಲ್ಲದೇ ಸಂಕಷ್ಟದಲ್ಲಿರುವ ಕಲಾವಿದರು, ತಂತ್ರಜ್ಞರಿಗೆ ತಮ್ಮ ಸ್ವಂತ ಹಣದಿಂದ ತಲಾ 5000 ರೂ.ಗಳಂತೆ ಪರಿಹಾರ ಒದಗಿಸುವುದಾಗಿ ಯಶ್ ಘೋಷಿಸಿದ್ದಾರೆ. ಸುಮಾರು 3000 ಕ್ಕೂ ಅಧಿಕ ಮಂದಿಗೆ ಈ ಸಹಾಯ ಧನ ತಲುಪಿಸಲಿದ್ದಾರೆ.ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ನಾಥ್ ಅವರೊಂದಿಗೆ