ಮೈಸೂರು: ರಾಕಿಂಗ್ ಸ್ಟಾರ್ ಯಶ್ ಎಲ್ಲೇ ಹೋಗಲಿ ಈಗ ಅವರ ಮುಂದಿನ ಸಿನಿಮಾ ಬಗ್ಗೆಯೇ ಜನ ಕೇಳ್ತಿದ್ದಾರೆ. ಇದೀಗ ಮೈಸೂರು ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ರಾಕಿಂಗ್ ಸ್ಟಾರ್ ಯಶ್ ಗೆ ಇದೇ ಪ್ರಶ್ನೆ ಎದುರಾಗಿದೆ.ಅಭಿಮಾನಿಗಳ ಜೈಕಾರದ ನಡುವೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಮಾಧ್ಯಮಗಳು ಅವರಿಗೆ ನೀವು ಹೇರ್ ಕಟ್ ಮಾಡಿಲ್ಲ. ಉದ್ದ ಕೂದಲು ಉಳಿಸಿಕೊಂಡಿದ್ದೀರಿ. ಹಾಗಾಗಿ ನಿಮ್ಮ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.