ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ಲಾಕ್ ಡೌನ್ ನಿಯಮ ಜಾರಿಗೊಳಿಸಿದೆ. ಅದರಂತೆ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಪ್ರತಿದಿನ ಕರ್ಫ್ಯೂ ಜಾರಿಗೊಳಿಸಿದೆ.ಈ ನಿಯಮ ಯಾರಿಗೆ ಲಾಭವಾಗುತ್ತೋ ಬಿಡುತ್ತೋ ಆದರೆ ಕರ್ನಾಟಕ ಸರ್ಕಾರದ ಹೊಸ ಲಾಕ್ ಡೌನ್ ನಿಯಮದಿಂದ ಪತ್ನಿಯರಂತೂ ಖುಷಿಯಾಗುತ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್ ತಮಾಷೆಯಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಪತ್ನಿ ರಾಧಿಕಾ ಪಂಡಿತ್ ಜತೆಗಿರುವ ಫೋಟೋ ಪ್ರಕಟಿಸಿರುವ ಯಶ್