ಇಬ್ಬರು ಮಕ್ಕಳಾದ ಮೇಲೂ ಯಶ್ ಮೇಲೆ ರಾಧಿಕಾ ಪಂಡಿತ್ ಗೆ ಬೇಸರವಿದೆಯಂತೆ!

ಬೆಂಗಳೂರು, ಗುರುವಾರ, 7 ನವೆಂಬರ್ 2019 (09:13 IST)

ಬೆಂಗಳೂರು: ಎರಡನೇ ಮಗುವಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮೊದಲ ಬಾರಿಗೆ ಮಾಧ‍್ಯಮಗಳೊಂದಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಾತನಾಡಿದ್ದಾರೆ.


 
ಸುದ್ದಿಗೋಷ್ಠಿ ನಡೆಸಿದ ಯಶ್ ದಂಪತಿ ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪುತ್ರ ಯಾರ ಹಾಗಿದ್ದಾನೆ ಎಂದು ಕೇಳಿದ್ದಕ್ಕೆ ಯಶ್ ನಗುತ್ತಲೇ ರಾಧಿಕಾಗೆ ತನ್ನ ಮೇಲಿರುವ ಆಕ್ಷೇಪವನ್ನು ತಮಾಷೆಯಾಗಿಯೇ ಹಂಚಿಕೊಂಡಿದ್ದಾರೆ.
 
ಒಂಭತ್ತು ತಿಂಗಳು ಹೊತ್ತು, ಹೆತ್ತವಳು ನಾನು. ಆದರೆ ಇಬ್ಬರೂ ಮಕ್ಕಳೂ ನನ್ನ ಥರಾ ಇಲ್ಲ. ನಿನ್ನ ಥರಾನೇ ಇದ್ದಾರೆ ಎಂದು ರಾಧಿಕಾ ಯಾವತ್ತೂ ನಂಗೆ ಹೇಳ್ತಾ ಇರ್ತಾಳೆ ಎಂದು ಯಶ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
 
ಇನ್ನು, ಪುತ್ರಿ ಜನಿಸಿದ ಮೇಲೆ ನಿಮ್ಮ ಅದೃಷ್ಟ ಬದಲಾಯಿತು ಎಂದು ಪತ್ರಕರ್ತರು ಹೇಳಿದ್ದಕ್ಕೆ ಮಕ್ಕಳು ಎಂದರೇ ಭಾಗ್ಯ. ಅದರಲ್ಲಿ ಗಂಡು-ಹೆಣ್ಣು ಎಂಬ ಬೇಧವಿಲ್ಲ. ಇವರ ಭವಿಷ್ಯದ ಬಗ್ಗೆ ಎಲ್ಲಾ ನಾವು ಈಗಲೇ ಯೋಚಿಸಿಲ್ಲ. ಸದ್ಯಕ್ಕೆ ಈಗಿನ ಖುಷಿಯನ್ನು ಅನುಭವಿಸುತ್ತಿದ್ದೇವೆ ಎಂದು ಯಶ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಆಸ್ಪತ್ರೆಯಿಂದ ಬಿಡುಗಡೆಯಾದ ರಾಧಿಕಾ ಪಂಡಿತ್: ಯಶ್ ಪುತ್ರನ ಫೋಟೋ ಇಲ್ಲಿದೆ ನೋಡಿ!

ಬೆಂಗಳೂರು: ಮೊನ್ನೆಯಷ್ಟೇ ಎರಡನೇ ಮಗುವಿಗೆ ಜನ್ಮವಿತ್ತ ನಟಿ ರಾಧಿಕಾ ಪಂಡಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ...

news

ಒಡೆಯ ಟೈಟಲ್ ಟ್ರ್ಯಾಕ್ ಬಿಡುಗಡೆ ದಿನಾಂಕ ಫಿಕ್ಸ್

ಬೆಂಗಳೂರು: ಈಗಾಗಲೇ ಟೀಸರ್ ಮೂಲಕ ದಾಖಲೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ...

news

ಮೊನ್ನೆ ದುನಿಯಾ ರಶ್ಮಿಗೆ, ಇಂದು ಚಂದನಾಗೆ ಕಿಶನ್ ಕಿಸ್! ಏನು ನಡೀತಿದೆ ಬಿಗ್ ಬಾಸ್ ಮನೆಯಲ್ಲಿ?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸಿಕ್ಸ್ ಪ್ಯಾಕ್ ಹೀರೋ, ಎಲಿಜಿಬಲ್ ಬ್ಯಾಚುಲರ್ ಸ್ಪರ್ಧಿ ಎಂದರೆ ಅದು ...

news

ಸಾಹಸ ಕಲಾವಿದರ ಸಂಘಕ್ಕೆ ಕಿಚ್ಚ ಸುದೀಪ್ ನೀಡಿದ ದೇಣಿಗೆ ಹಣವೆಷ್ಟು ಗೊತ್ತೇ?!

ಬೆಂಗಳೂರು: ಸಿನಿಮಾ ರಂಗದಲ್ಲಿ ಯಾರೇ ಕಷ್ಟ ಎಂದು ಬಂದರೆ ಸಹಾಯ ಮಾಡುವವರಲ್ಲಿ ಮೊದಲಿಗರು ಎಂದರೆ ಕಿಚ್ಚ ...