ಬೆಂಗಳೂರು: ಕೆಜಿಎಫ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ರಾಕಿಂಗ್ ಸ್ಟಾರ್ ಯಶ್ ಈಗ ತಮಿಳುನಾಡು ಕಡೆ ತಮಿಳಿನಲ್ಲಿ ಪ್ರಚಾರ ಮಾಡುವುದನ್ನು ನೋಡಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.ತಮಿಳುನಾಡಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮತ್ತು ನಿನ್ನೆಯಷ್ಟೇ ಅಲ್ಲಿನ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಯಶ್ ಪಕ್ಕಾ ತಮಿಳಿನಲ್ಲಿ ಮಾತನಾಡಿದರು. ಯಾವ ನೆಲದಲ್ಲಿ ನಿಂತಿದ್ದೇನೋ ಆ ನೆಲದ ಭಾಷೆಗೆ, ಸಂಸ್ಕೃತಿಗೆ ಗೌರವ ಕೊಡುವುದು ನನ್ನ ಕರ್ತವ್ಯ. ಅದಕ್ಕೆ ತಮಿಳಿನಲ್ಲೇ ಮಾತನಾಡುತ್ತೇನೆ ಎಂದು