Widgets Magazine

ಮಗಳ ಬರ್ತ್ ಡೇ ದಿನವೇ ರಾಕಿಂಗ್ ಸ್ಟಾರ್ ಯಶ್ ಗೆ ಸಿಗುತ್ತಿದೆ ಈ ಪ್ರಶಸ್ತಿ

ಬೆಂಗಳೂರು| Krishnaveni K| Last Modified ಸೋಮವಾರ, 2 ಡಿಸೆಂಬರ್ 2019 (09:03 IST)
ಬೆಂಗಳೂರು: ಸಿನಿಮಾ ರಂಗದಲ್ಲಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಉತ್ತಮ ಸಾಧನೆ ಮಾಡಿರುವ ಕಾರಣಕ್ಕೆ ರಾಕಿಂಗ್ ಸ್ಟಾರ್ ಯಶ್ ಗೆ ಸಿದ್ಧ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

 
ಮುಗಳಖೋಡ-ಜಡಗಾ ಮಠದ ಡಿವೈನ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನೀಡಲಾಗುತ್ತಿರುವ ಸಿದ್ಧಶ್ರೀ ರಾಷ್ಟ್ರ ಪ್ರಶಸ್ತಿಗೆ ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಆಯ್ಕೆಯಾಗಿದ್ದರು.
 
ಇಂದು ಯಲಹಂಕದ ಕೆಂಪೇಗೌಡ ಕನ್ವೆನ್ಷನ್ ಹಾಲ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ 35 ನೇ ಗುರುವಂದನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.




ಇದರಲ್ಲಿ ಇನ್ನಷ್ಟು ಓದಿ :