ಬೆಂಗಳೂರು: ಕೆಜಿಎಫ್ ಕ್ರೇಜ್ ನಲ್ಲಿ ಮುಳುಗಿದ್ದಾಗ ರಾಕಿಂಗ್ ಸ್ಟಾರ್ ಯಶ್ ಮುಂದೆ ಬಾಹುಬಲಿ ಖ್ಯಾತಿಯ ರಾಜಮೌಳಿ ಜತೆ ಸಿನಿಮಾ ಮಾಡುತ್ತಾರೆ ಎಂದೆಲ್ಲಾ ಸುಳ್ಳು ಸುದ್ದಿ ಹರಿದುಬಂದಿತ್ತು.ಕೊನೆಗೆ ಸ್ವತಃ ಯಶ್ ಆ ಸುದ್ದಿ ಎಲ್ಲಾ ಸುಳ್ಳು. ನಾನು ರಾಜಮೌಳಿ ಜತೆ ಸಿನಿಮಾ ಮಾಡುತ್ತಿಲ್ಲ. ಈ ಸುದ್ದಿಗಳನ್ನೆಲ್ಲಾ ನಂಬಬೇಡಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.ಆದರೆ ಈಗ ಮತ್ತೆ ಯಶ್ ರಾಜಮೌಳಿ ಜತೆ ಕಾಣಿಸಿಕೊಳ್ಳುವ ಸುದ್ದಿ ಬಂದಿದೆ. ಈ ಬಾರಿ ಇದು