ಬೆಂಗಳೂರು: ಸುಮಲತಾ ಅಂಬರೀಶ್-ಎಚ್ ಡಿಕೆ ನಡುವಿನ ಟಾಕ್ ವಾರ್ ಬಗ್ಗೆ ಪ್ರತಿಕ್ರಿಯಿಸಿದ್ದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮುಂದೆ ಇಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಮಾಧ್ಯಮಗಳಿಗೆ ರಾಕ್ ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದಾರೆ.ತಮ್ಮ ನಿವಾಸದ ಮುಂದೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ರಾಕ್ ಲೈನ್ ವೆಂಕಟೇಶ್ ‘ನಾನು ಯಾರನ್ನೂ ಅಗೌರವಯುತವಾಗಿ ಮಾತನಾಡಿಸಿಲ್ಲ. ಕುಮಾರಸ್ವಾಮಿಯವರನ್ನೂ ಕುಮಾರಣ್ಣ ಅಂತ ಗೌರವದಿಂದಲೇ ಮಾತನಾಡಿಸಿದ್ದೇನೆ. ಪ್ರತಿಯೊಬ್ಬ ಕಾರ್ಯಕರ್ತರನ್ನೂ ಗೌರವದಿಂದಲೇ ಕಾಣುತ್ತೇನೆ.ಆದರೆ ಮಾಧ್ಯಮಗಳಲ್ಲಿ