ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಪುಷ್ಪ ಒಂದು ಕಡೆಯಾದರೆ ಇದೀಗ ಜನವರಿ 7 ರಂದು ಬಿಡುಗಡೆಯಾಗಲಿರುವ ಆರ್ ಆರ್ ಆರ್ ಸಿನಿಮಾ ಭಯದಲ್ಲಿ ಇಲ್ಲಿನ ನಿರ್ಮಾಪಕರಿದ್ದಾರೆ.ಪುಷ್ಪ ಸಿನಿಮಾದಂತೆ ಆರ್ ಆರ್ ಆರ್ ಸಿನಿಮಾಗೂ ಕರ್ನಾಟಕದಲ್ಲಿ ಬಹುತೇಕ ಥಿಯೇಟರ್ ಗಳು ಬುಕ್ ಆಗೋದು ಗ್ಯಾರಂಟಿ. ಇದರಿಂದಾಗಿ ಕನ್ನಡದ ಸಣ್ಣ ಪುಟ್ಟ ಸಿನಿಮಾಗಳು ಎತ್ತಂಗಡಿಯಾಗಲಿವೆ.ಹೀಗಾಗಿ ಜನವರಿ 7 ರ ಆಸುಪಾಸಿನಲ್ಲಿ ಚಿತ್ರಬಿಡುಗಡೆ