ಕೆಜಿಎಫ್ 2 ಸಿನಿಮಾ ರಿಲೀಸ್ ಬಗ್ಗೆ ಬಂದಿದೆ ಮತ್ತೊಂದು ಸುದ್ದಿ

ಬೆಂಗಳೂರು| Krishnaveni K| Last Modified ಗುರುವಾರ, 29 ಜುಲೈ 2021 (09:23 IST)
ಬೆಂಗಳೂರು: ಸಿನಿಮಾ ರಿಲೀಸ್ ಯಾವಾಗ? ಈ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಸಿನಿಮಾ ತಂಡವನ್ನೂ ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಇದುವರೆಗೆ ಚಿತ್ರತಂಡದಿಂದ ಉತ್ತರ ಸಿಕ್ಕಿಲ್ಲ.

 
ಲಾಕ್ ಡೌನ್ ಇಲ್ಲದೇ ಹೋಗಿದ್ದರೆ ಜುಲೈ 16 ಕ್ಕೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಚಿತ್ರ ಬಿಡುಗಡೆ ಮುಂದೆ ಹೋಯಿತು. ಬಳಿಕ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಬಹುದು ಎಂಬ ಸುದ್ದಿಯಿತ್ತು. ಆದರೆ ಅದೂ ಇಲ್ಲವೆನಿಸುತ್ತದೆ.
 
ಇದೀಗ ರಾಕಿಂಗ್ ಸ್ಟಾರ್ ಯಶ್ ಅದೃಷ್ಟದ ತಿಂಗಳು ಡಿಸೆಂಬರ್ ನಲ್ಲೇ ಸಿನಿಮಾ ಬಿಡುಗಡೆಯಾಗಬಹುದು ಎಂಬ ಮಾತು ಕೇಳಿಬರುತ್ತದೆ. ಕ್ರಿಸ್ ಮಸ್ ಹಬ್ಬಕ್ಕೆ ಅಥವಾ ಹೊಸ ವರ್ಷದ ಹೊಸ್ತಿಲಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡ ಸಷ್ಟನೆ ನೀಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :