ಚೆನ್ನೈ: ಸಹಜ ಸುಂದರಿ ಸಾಯಿ ಪಲ್ಲವಿ ಈಗಾಗಲೇ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಮ್ಮದೇ ವರ್ಚಸ್ಸು ಸೃಷ್ಟಿಸಿದ್ದಾರೆ. ಇದೀಗ ಅವರ ಸಹೋದರಿ ಪೂಜಾ ಕಣ್ಣನ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.ಪೂಜಾ ಕಣ್ಣನ್ ಅಭಿನಯದ ಚೊಚ್ಚಲ ಸಿನಿಮಾ ‘ಚಿತ್ತಿರ ಚೆವ್ವಾನಂ’ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಮೂಲಕ ಅಕ್ಕನಂತೇ ಚಿತ್ರರಂಗದಲ್ಲಿ ನೆಲೆಯೂರಬಹುದು ಎಂಬ ವಿಶ್ವಾಸದಲ್ಲಿ ಪೂಜಾ ಇದ್ದಾರೆ.ನೋಡಲು ಥೇಟ್ ಅಕ್ಕ ಸಾಯಿ ಪಲ್ಲವಿ ಥರನೇ ಇರುವ ಪೂಜಾಗೆ ಇದು ಪ್ಲಸ್ ಪಾಯಿಂಟ್ ಕೂಡಾ ಆಗಲಿದೆ.