Widgets Magazine

ದಿಗಂತ್ ಮಂಚಾಲೆ-ಪಿ ಕಶ್ಯಪ್ ಬ್ಯಾಡ್ಮಿಂಟನ್ ಆಟ: ಸೈನಾ ನೆಹ್ವಾಲ್ ಪ್ರತಿಕ್ರಿಯೆ

ಹೈದರಾಬಾದ್| Krishnaveni K| Last Modified ಗುರುವಾರ, 15 ಅಕ್ಟೋಬರ್ 2020 (09:19 IST)
ಹೈದರಾಬಾದ್: ಸ್ಯಾಂಡಲ್ ವುಡ್ ನಟ ದಿಗಂತ್ ಮಂಚಾಲೆ ತಾವು ಹಾಗೂ ಬ್ಯಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್ ಜತೆಗೆ ಬ್ಯಾಡ್ಮಿಂಟನ್ ಆಡುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
 

ಈ ವಿಡಿಯೋ ನೋಡಿದ ಕಶ್ಯಪ್ ಪತ್ನಿ, ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಥಮ್ಸ್ ಅಪ್ ಮಾಡುವ ಮೂಲಕ ದಿಗಂತ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು, ದಿಗಂತ್ ಅದ್ಭುತವಾಗಿ ಕಶ್ಯಪ್ ಗೆ ಎದಿರೇಟು ಕೊಡುವ ದೃಶ್ಯ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ನೀವೂ ಚೆನ್ನಾಗಿ ಆಡ್ತೀರಿ ಎಂದು ಪ್ರಶಂಸಿದ್ದಾರೆ. ದಿಗಂತ್ ಫಿಟ್ನೆಸ್ ಗೆ ಹೆಚ್ಚು ನೀಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಡುವು ಸಿಕ್ಕಾಗಲೆಲ್ಲಾ ಸೈಕ್ಲಿಂಗ್ ಮಾಡುತ್ತಿರುತ್ತಾರೆ. ಇದೀಗ ಬ್ಯಾಡ್ಮಿಂಟನ್ ಆಡಿ ಗಮನ ಸೆಳೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :