ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಸಲಾರ್. ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಇದೇ ಡಿಸೆಂಬರ್ 22 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲಂಸ್ ನಿರ್ಮಾಣ ಎಂದರೆ ಕೇಳಬೇಕೇ? ಅದರಲ್ಲೂ ಪ್ರಭಾಸ್ ಸಿನಿಮಾ ಎಂದರೆ ನೋಡಲು ಕಾಯುವ ಪ್ರತ್ಯೇಕ ವರ್ಗವೇ ಇದೆ. ಹೀಗಿರುವಾಗ ಸಲಾರ್ ಸಿನಿಮಾಗೆ ಸಹಜವಾಗಿಯೇ ಬಿಡುಗಡೆಗೂ ಮುನ್ನವೇ ಭಾರೀ ಬೇಡಿಕೆಯಿದೆ.ಕೇವಲ ಭಾರತದಲ್ಲಿ ಮಾತ್ರವಲ್ಲ, ದೂರದ ಅಮೆರಿಕಾದಲ್ಲಿ ಚಿತ್ರ ಭರ್ಜರಿ