ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾದಿಂದ ಇಂದು ಅಭಿಮಾನಿಗಳಿಗೆ ದೊಡ್ಡ ಉಡುಗೊರೆಯೇ ಸಿಗಲಿದೆ.ಇಂದು ಸಿನಿಮಾದ ಮೊದಲ ಹಾಡು ಬಿಡುಗಡೆಯಾಗುತ್ತಿದೆ. ಸಲಾರ್ ಇಬ್ಬರು ಸ್ನೇಹಿತರ ನಡುವಿನ ಕತೆಯಾಗಿದೆ. ಹೀಗಾಗಿ ಈ ಹಾಡು ಕೂಡಾ ಸ್ನೇಹಿತರಿಬ್ಬರ ಕುರಿತಾಗಿದೆ. ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಕೆಜಿಎಫ್ ನಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದ ರವಿ ಬಸ್ರೂರು ಮತ್ತೊಮ್ಮೆ ಇಲ್ಲಿ ತಮ್ಮ ಮ್ಯಾಜಿಕ್ ಮಾಡಲಿದ್ದಾರೆ. ಕನ್ನಡ, ಹಿಂದಿ,