ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಹೊಂಬಾಳೆ ಫಿಲಂಸ್ ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಸಲಾರ್ ಸಿನಿಮಾ ಅಪ್ ಡೇಟ್ ಕೊನೆಗೂ ಸಿಕ್ಕಿದೆ.ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಸಿನಿಮಾಗಳೆಂದರೆ ಚೆನ್ನಾಗಿರುತ್ತದೆ ಎಂದೇ ಅಭಿಮಾನಿಗಳ ನಿರೀಕ್ಷೆ. ಅದಕ್ಕೆ ತಕ್ಕಂತೆ ಸಲಾರ್ ಕೂಡಾ ಅದ್ಧೂರಿಯಾಗಿ ತಯಾರಾಗಿದೆ.ಇದೀಗ ಸಲಾರ್ ಸಿನಿಮಾದ ಟೀಸರ್ ನ್ನು ಆದಿಪುರುಷ್ ಸಿನಿಮಾ ಪ್ರದರ್ಶನದ ಜೊತೆಗೆ ಹೊರಬಿಡಲು ಚಿತ್ರತಂಡ ತೀರ್ಮಾನಿಸಿದೆ. ಅದರಂತೆ ಆದಿಪುರುಷ್ ಸಿನಿಮಾ ಪ್ರದರ್ಶನವಾಗುವಾಗ