ಜುಲೈ 6 ಕ್ಕೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸುಲ್ತಾನ್ ಸಿನಿಮಾ

Navya K M| Last Updated: ಬುಧವಾರ, 29 ಜೂನ್ 2016 (09:11 IST)
ಅಭಿಮಾನಿಗಳು ಬಹು ದಿನಗಳಿಂದ ಕುತೂಹಲದಿಂದ ಕಾಯುತ್ತಿರುವ ಆ ಕ್ಷಣ ಹತ್ತಿರವಾಗುವ ದಿನ ಬರುತ್ತಿದೆ. ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಸಿನಿಮಾ ಈದ್ ಹಬ್ಬಕ್ಕೆ ರಿಲೀಸ್ ಆಗುತ್ತೆ ಅಂತಾ ಹೇಳಲಾಗಿದ್ದರು ಸಿನಿಮಾ ರಿಲೀಸ್ ಆಗುತ್ತೋ ಇಲ್ವೋ ಅಂತಾ ಅಭಿಮಾನಿಗಳು ಡೌಟ್ ನಲ್ಲಿದ್ದರು. ಆದ್ರೀಗ ಅಂತಹವರಿಗ ಸಂತಸದ ಸುದ್ದಿಯೊಂದು ಬಂದಿದೆ.
ಹೌದು... ಮುಂದಿನ ತಿಂಗಳು ಜುಲೈ 6 ರಂದು ಸುಲ್ತಾನ್ ಸಿನಿಮಾ ರಿಲೀಸ್ ಆಗುತ್ತಿದೆ.ಸಿನಿಮಾದ ನಿರ್ದೇಶಕರಾದ ಅಲಿ ಅಬ್ಬಾಸ್ ಜಾಫರ್ ಅವರು ಜುಲೈ 6 ರಂದು ನಮ್ಮ ಸಿನಿಮಾ ರಿಲೀಸ್ ಆಗುತ್ತೆ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ಮೊನ್ನೆಯಷ್ಟೇ ಸೆನ್ಸಾರ್ ಬೋರ್ಡ್ ಸುಲ್ತಾನ್ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿತ್ತು.ಅಲ್ಲದೇ ಸಿನಿಮಾದ ಒಂದೇ ಒಂದು ಕಡೆ ಕೂಡ ಕತ್ತರಿ ಹಾಕಿರಲಿಲ್ಲ ಸೆನ್ಸಾರ್ ಬೋರ್ಡ್ . ಹಾಗಾಗಿ ಸಿನಿಮಾ ತಂಡ ಕೂಡ ಫುಲ್ ಖುಷಿಯಾಗಿತ್ತು. ಅಂದ್ಹಾಗೆ ಸುಲ್ತಾನ್ ಸಿನಿಮಾ ಈದ್ ಹಬ್ಬಕ್ಕೆ ರಿಲೀಸ್ ಆಗುತ್ತಿರೋದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
 
ಸುಲ್ತಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಅವರು ಸಲ್ಲುಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಬ್ಯಾನರ್ ನಡಿ ಆದಿತ್ಯಾ ಛೋಪ್ರಾ ಅವರು ಸುಲ್ತಾನ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :