Widgets Magazine

ಸದ್ಯದಲ್ಲೇ ಕನ್ನಡ ಬಿಗ್ ಬಾಸ್ ಗೆ ಬರ್ತಾರಂತೆ ಸಲ್ಮಾನ್ ಖಾನ್

ಬೆಂಗಳೂರು| Krishnaveni K| Last Modified ಸೋಮವಾರ, 9 ಡಿಸೆಂಬರ್ 2019 (10:34 IST)
ಬೆಂಗಳೂರು: ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಪ್ರತ್ಯಕ್ಷರಾಗಿ ಎಲ್ಲರಿಗೂ ಅಚ್ಚರಿಯುಂಟುಮಾಡಿದ್ದಾರೆ. ಹಿಂದಿ ಬಿಗ್ ಬಾಸ್ ವೇದಿಕೆಯಿಂದ ಕಿಚ್ಚನ ಜತೆ ತಮಾಷೆಯಾಗಿ ಮಾತಾಡಿಕೊಂಡರು.
 

ಈ ನಡುವೆ ಕಿಚ್ಚನಿಂದ ಕೆಲವು ಕನ್ನಡ ಪದಗಳನ್ನು ಸಲ್ಮಾನ್ ಕೇಳಿ ಕಲಿತುಕೊಂಡರು. ಅದಾದ ಬಳಿಕ ಸಲ್ಮಾನ್ ಖಾನ್ ನಾನೂ ಒಂದು ದಿನ ಅಲ್ಲಿಗೆ ಬಂದು ಕನ್ನಡ ಬಿಗ್ ಬಾಸ್ ಹೋಸ್ಟ್ ಮಾಡಬಹುದು ಅಂದರು.
 
ಅದಕ್ಕೆ ಕಿಚ್ಚ ಸುದೀಪ್ ಕೂಡಾ ಖಂಡಿತವಾಗಿಯೂ ಒಳಗಿರುವ ಕೆಲವು ಸ್ಪರ್ಧಿಗಳಿಗೆ ನಿಮ್ಮ ಅವಶ್ಯಕತೆಯಿದೆ ಎಂದು ತಮಾಷೆ ಮಾಡಿದರು. ಕೊನೆಯಲ್ಲೂ ಖಂಡಿತಾ ಒಮ್ಮೆ ಅಲ್ಲಿಗೆ ಬರುತ್ತೇನೆ ಎಂದು ಸಲ್ಮಾನ್ ಹೇಳಿದ್ದಾರೆ. ಹಾಗಾಗಿ ಮುಂದೊಂದು ದಿನ ಸಲ್ಮಾನ್ ರನ್ನು ಕನ್ನಡ ಬಿಗ್ ಬಾಸ್ ವೇದಿಕೆಯಲ್ಲಿ ಅತಿಥಿಯಾಗಿ ನೋಡಿದರೂ ಅಚ್ಚರಿಯಿಲ್ಲ!




ಇದರಲ್ಲಿ ಇನ್ನಷ್ಟು ಓದಿ :