ಹೈದರಾಬಾದ್: ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಬೆನ್ನಲ್ಲೇ ಸಮಂತಾ ಋತು ಪ್ರಭು ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ಅದೆಲ್ಲದಕ್ಕೂ ಸಮಂತಾ ಈಗ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಸಮಂತಾ-ನಾಗಚೈತನ್ಯ ವಿಚ್ಛೇದನದ ಬಗ್ಗೆ ಹಲವು ಕಾರಣಗಳ ಬಗ್ಗೆ ಅಂತರ್ಜಾಲದಲ್ಲಿ, ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಕೆಲವರು ಸಮಂತಾ ಗರ್ಭಪಾತ ಮಾಡಿಸಿಕೊಂಡರು, ಅವರಿಗೆ ಮಕ್ಕಳಾಗುವುದು ಬೇಕಿರಲಿಲ್ಲ, ಅವರೀಗ ಬೇರೊಬ್ಬರ ಪ್ರೀತಿಗೆ ಬಿದ್ದಿದ್ದಾರೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಿಸಿದ್ದರು.ಇದೆಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ಸಮಂತಾ ಇಂತಹ