ಹೈದರಾಬಾದ್: ಇತ್ತೀಚೆಗೆ ತನ್ನನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರಿಗೆ ನಟಿ ಸಮಂತಾ ಋತು ಪ್ರಭು ಪವರ್ ಫುಲ್ ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ.ದಲೈಲಾಮಾ ಅವರ ಮೌನದ ಕುರಿತಾದ ಮಾತೊಂದನ್ನು ಅವರು ಉಲ್ಲೇಖಿಸಿ ಟ್ರೋಲಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.‘ನನ್ನ ಮೌನವನ್ನು ತಪ್ಪಾಗಿ ಅರ್ಥೈಸಬೇಡಿ. ನನ್ನ ಉದಾರತೆಯನ್ನು ದೌರ್ಬಲ್ಯವೆಂದುಕೊಳ್ಳಬೇಡಿ’ ಉದಾರತೆಯ ಅವಧಿಯೂ ಮುಗಿಯುತ್ತದೆ’ ಎಂದು ಸಮಂತಾ ಬರೆದುಕೊಂಡಿದ್ದಾರೆ.