ಬೆಂಗಳೂರು: ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗಡೆ ತಮ್ಮ ಮೇಲೆ ಎಚ್ ಎಸ್ ಆರ್ ಲೇಔಟ್ ಪಾರ್ಕ್ ಒಂದರಲ್ಲಿ ಹಾಡ ಹಗಲೇ ಹಲ್ಲೆ ಮಾಡಲಾಗಿದೆ ಎಂದು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದಾರೆ.ತಮ್ಮ ಸ್ನೇಹಿತರೊಂದಿಗೆ ಪಾರ್ಕ್ ನಲ್ಲಿ ವರ್ಕೌಟ್ ಮಾಡುವಾಗ ಮಹಿಳೆಯೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಪ್ರಶ್ನಿಸಿದಾಗ ಹೊಡೆಯಲು ಬಂದಿದ್ದಲ್ಲದೆ, ಈ ರೀತಿ ತುಂಡು ಬಟ್ಟೆ ಹಾಕಿಕೊಂಡು ಹೊರಗಡೆ ಓಡಾಡಿಕೊಂಡಿರ್ತೀರಲ್ಲಾ? ನೀವು ಹುಡುಗೀರಾ ಇಲ್ಲಾ ಕ್ಯಾಬರೆ ಡ್ಯಾನ್ಸರಾ ಎಂದು