ಬೆಂಗಳೂರು: ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಎಲ್ಲಿ ಹೋದರೂ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. ಸಾಕಷ್ಟು ಜನ ಇವರನ್ನು ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ನಟಿ ಸಂಯುಕ್ತ ತನ್ನನ್ನು ಟ್ರೋಲ್ ಮಾಡುವವರಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಂಯುಕ್ತರಿಗೆ ಟ್ರೋಲ್ಗಳ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಂಯುಕ್ತ, ನಾನು ಏನು ಮಾಡಬೇಕು ಎನ್ನುವುದು ನನಗಿಂತ ಚೆನ್ನಾಗಿ ನಿಮಗೆ ಗೊತ್ತಾಗುತ್ತೆ, ಅದು ಹೇಗೆ? ಟ್ರೋಲ್ ಮಾಡಲು ನಿಮಗೆ ಟೈಮ್ ಎಲ್ಲಿ ಸಿಗುತ್ತೆ?