ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಪಘಾತದಲ್ಲಿ ಅಗಲಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ನೆನಪಿಗಾಗಿ ಆಪ್ತರು ವಿಜಯ್ ಹುಟ್ಟೂರು ಪಂಚನಹಳ್ಳಿಯಲ್ಲಿ ಪುತ್ಥಳಿಯನ್ನು ಅನಾವರಣಗೊಳಿಸಿದರು. ವಿಜಯ್ ಸಹೋದರರಾದ ಬಿ.ವೀರೂಪಾಕ್ಷ ಮತ್ತು ಸಿದ್ದೇಶಕುಮಾರ್ ಸಹೋದರನ ಸುಂದರ ಮೂರ್ತಿಯನ್ನು ತಯಾರಿಸಿದ್ದು, ಶನಿವಾರ ಪುತ್ಥಳಿಯನ್ನು ಪಂಚನಹಳ್ಳಿಯ ವಿಜಯ್ ಸಮಾಧಿ ಸ್ಥಳದಲ್ಲಿ ಅನಾವರಣಗೊಳಿಸಲಾಯಿತು. ವಿಜಯ್ ಅವರ ಪ್ರಥಮ ಪುಣ್ಯಸ್ಮರಣೆಯಲ್ಲಿ ವಿಜಯ್ ಅವರ ಪರಮಾಪ್ತ ಸ್ನೇಹಿತರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ನಿರ್ದೇಶಕ ವೀರೂ ಮಲ್ಲಣ್ಣ