ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರಾದ ರಾಗಿಣಿ ಮತ್ತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಕಂಠೀರವ ಸ್ಟುಡಿಯೋದಲ್ಲಿ ಮದುವೆಯಾದರು. ಇದಕ್ಕೆ ನಿರ್ಮಾಪಕ ಸಾರಾ ಗೋವಿಂದು ಸಾಕ್ಷಿಯಾದರು! ಅರೇ ಇದೇನಿದು ಎಂದು ಸುದ್ದಿ ಓದಿ ನಿಜವಾಗಿ ಇವರ ಮದುವೆಯಾಯ್ತು ಎಂದುಕೊಳ್ಳಬೇಡಿ. ಹೊಸ ಸಿನಿಮಾವೊಂದಕ್ಕಾಗಿ ಇಬ್ಬರೂ ಮದುವೆ ಗೆಟಪ್ ನಲ್ಲಿ ಮಂಟಪದಲ್ಲಿ ಕುಳಿತುಕೊಂಡು ರೀಲ್ ನಲ್ಲಿ ಮದುವೆಯಾದರು.ವಿಲನ್ ಎಂಬ ಸಿನಿಮಾ ನಂತರ ಈ ಜೋಡಿಯ ಮತ್ತೊಂದು ಸಿನಿಮಾ ಸೆಟ್ಟೇರಿದೆ.