ಸ್ಯಾಂಡಲ್ವುಡ್ ಬೆಡಗಿ ಐಂದ್ರಿತಾ ರೇ ಬಾಲಿವುಡ್ಗೆ ಜಂಪ್ ಆಗಿದ್ದಾರೆ. ಈಗಾಗಲೆ ಚಿತ್ರದ ಶೂಟಿಂಗ್ ಆರಂಭವಾಗಿದ್ದು ಸ್ವಿಟ್ಜರ್ಲ್ಯಾಂಡ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ವಿಕಾಶ್ ಶರ್ಮಾ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಸಿನೆಮಾ ಇದು. ಸ್ವಿಟ್ಜರ್ಲ್ಯಾಂಡ್ನಲ್ಲಿ ಸದ್ಯಕ್ಕೆ ವಿಪರೀತ ಚಳಿ ಇದ್ದು ಉಷ್ಣಾಂಶ -15℃ ನಿಂದ -20°C ವರೆಗೆ ಇದೆ. ಇನ್ನೂ ಒಂದು ವಾರ ಕಾಲ ಅಲ್ಲೇ ಚಿತ್ರೀಕರಣ ನಡೆಯಲಿದೆ. ಐಂದ್ರಿತಾ ಈಗಾಗಲೆ ಎರಡು ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.