ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದ ನಾಯಕ ಮತ್ತು ನಾಯಕಿ ನಟಿಯರಿಗೆ ಮಾಡುತ್ತಿರುವ ತಾರತಮ್ಯದ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದರು. ಅದಕ್ಕೀಗ ಸ್ಯಾಂಡಲ್ ವುಡ್ ನಟಿಯರ ಬೆಂಬಲ ಸಿಕ್ಕಿದೆ.ಕಾಸ್ಮೆಟಿಕ್ ಸರ್ಜರಿ ವೇಳೆ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ರಮ್ಯಾ, ನಾಯಕಿ ನಟಿಯರು ದಪ್ಪಗಿದ್ದರೆ ಚಿತ್ರರಂಗದವರು ಸ್ವೀಕರಿಸಲ್ಲ ಎಂದಿದ್ದರು. ಆದರೆ ಹೀರೋ ಹೇಗಿದ್ದರೂ ನಡೆಯುತ್ತದೆ ಎಂದಿದ್ದರು.ಅವರ ಈ ಆಕ್ರೋಶಕ್ಕೆ ಸ್ಯಾಂಡಲ್ ವುಡ್ ನಟಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ.