ಬೆಂಗಳೂರು: ಇನ್ನೇನು 2020 ಮುಗಿಯುತ್ತಾ ಬಂತು. ಕೆಲವೇ ದಿನಗಳಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಿದ್ಧರಾಗುತ್ತೇವೆ. ಹಲವರು ಈ ವರ್ಷ ಮುಗಿದರೆ ಸಾಕಪ್ಪಾ ಎಂದು ಕಾಯುತ್ತಿರುವಂತಾಗಿದೆ. ಕಾರಣ ಈ ವರ್ಷ ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೂ ಅಷ್ಟು ಕರಾಳ ದಿನಗಳನ್ನು ಎದುರಿಸಿದ್ದಾರೆ. ಕೊರೋನಾ ಮಹಾಮಾರಿ ಒಂದೆಡೆಯಾದರೆ ಈ ವರ್ಷ ಸಾಲು ಸಾಲಾಗಿ ಸೆಲೆಬ್ರಿಟಿಗಳು ಸಾವಿಗೀಡಾಗಿ ಶಾಕ್ ಕೊಟ್ಟಿದ್ದರು. ಸ್ಯಾಂಡಲ್ ವುಡ್ ನಲ್ಲಿ ಚಿರಂಜೀವಿ ಸರ್ಜಾ (ಹೃದಯಾಘಾತದಿಂದ ಸಾವು), ಬುಲೆಟ್ ಪ್ರಕಾಶ್ (ಕಿಡ್ನಿ