ಚಿತ್ರರಂಗ ಮೇಲೇಳಲು ಜನರೇ ಆಸರೆಯಾಗಬೇಕು

ಬೆಂಗಳೂರು| Krishnaveni K| Last Modified ಶನಿವಾರ, 2 ಅಕ್ಟೋಬರ್ 2021 (09:03 IST)
ಬೆಂಗಳೂರು: ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ಸಿಕ್ಕ ಬೆನ್ನಲ್ಲೇ ಸ್ಯಾಂಡಲ್ ವುಡ್ ಮಂದಿ ಸಿನಿಮಾ ಬಿಡುಗಡೆಗೆ ಸಾಲುಗಟ್ಟಿ ನಿಂತಿದ್ದಾರೆ.
 > ಇದುವರೆಗೆ ನಷ್ಟದಲ್ಲಿದ್ದ ಚಿತ್ರರಂಗದಲ್ಲಿ ಮತ್ತೆ ಹೊಸ ಸಿನಿಮಾಗಳು ಸೆಟ್ಟೇರಬೇಕಾದರೆ ನಿರ್ಮಾಪಕರ ಜೇಬು ತುಂಬಲೇಬೇಕು. ಇದಕ್ಕೆ ಜನರೇ ಆಸರೆಯಾಗಬೇಕು.>   ಈಗ ಒಟಿಟಿ ಫಾರ್ಮ್ಯಾಟ್ ಗಳು ಜನಪ್ರಿಯವಾಗಿದೆ. ಹೊಸ ಸಿನಿಮಾಗಳು ಇಲ್ಲಿಯೇ ಬರುತ್ತವೆ ಎನ್ನುವುದಕ್ಕೆ ಹಲವರು ಚಿತ್ರಮಂದಿರಗಳಿಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಇದರ ನಡುವೆ ಕೆಲವರಿಗೆ ಇನ್ನೂ ಕೊರೋನಾ ಭಯ ದೂರವಾಗಿಲ್ಲ. ಹೀಗಿರುವಾಗ ಜನ ಭಯಬಿಟ್ಟು ಚಿತ್ರರಂಗಕ್ಕೆ ಬರದೇ ನಿರ್ಮಾಪಕರ ಜೇಬು ತುಂಬಲ್ಲ. ನಷ್ಟದಲ್ಲಿರುವ ಚಿತ್ರರಂಗಕ್ಕೆ ಮೇಲೇಳಲು ಈಗ ಜನರೇ ಆಸರೆಯಾಗಬೇಕಿದೆ.ಇದರಲ್ಲಿ ಇನ್ನಷ್ಟು ಓದಿ :